Posts

Showing posts with the label ತ್ರಿವೇಣಿ

ಬೆಕ್ಕಿನ ಕಣ್ಣು by ತ್ರಿವೇಣಿ

Image
  ಒಬ್ಬ ಹೆಣ್ಣಿನ ಅಸಹಾಯಕತೆ, ಹತಾಶೆಯನ್ನು ತ್ರಿವೇಣಿಯವರಂತೆ ಮತ್ಯಾರಿಗೂ ವರ್ಣಿಸಲು ಸಾಧ್ಯವಿಲ್ಲವೇನೋ? ಅವಳ ಆ ಅದುಮಿಟ್ಟ ಹತಾಶೆಯೇ ಕ್ರೌರ್ಯವಾಗಿ ಹೊರಹೊಮ್ಮುವುದು ಅಂತ ಯಾರಿಗೂ ಅರ್ಥವಾಗೋಲ್ಲ. ಅವಳು ತನ್ನ ಆಕ್ರೋಶ ತೋರಿಸಿದರೆ ಜನ "ಅವಳಿಗೆ ದೆವ್ವ ಮೆಟ್ಟಿದೆ" ಅಂತಷ್ಟೇ ತಿಳಿಯುತ್ತಾರೆ. ಆಗ ದೆವ್ವ ಬಿಡಿಸುವವರನ್ನು ಕರೆದುಕೊಂಡು ಬಂದು ಆ ಹೆಣ್ಣಿಗೆ ಚಿತ್ರಹಿಂಸೆ ನೀಡುತ್ತಾರೆ. ಆದರೆ ತ್ರಿವೇಣಿ ಅವರು ಮಾತ್ರವೇ ಅವಳ ಈ ಮನಸ್ಥಿತಿಯ ಹಿಂದಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಮ್ಮ ಮುಂದೆ ಇಡುತ್ತಾರೆ. ಕಥೆ ಹೀಗಿದೆ. ತನ್ನ ತಾಯಿಯ ಅಕ್ಕರೆಯಲ್ಲಿ ಮಿಂದು ಬೆಳೆಯುತ್ತಿದ್ದ ಒಬ್ಬ ಸ್ವತಂತ್ರ ಮನೋಭಾವದ ಹೆಣ್ಣುಮಗಳು ಕುಸುಮ, ಬುದ್ಧಿಯೇ ಇರದ ಚಿಕ್ಕ ವಯಸ್ಸಿನಲ್ಲಿ ತನಗೆ ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾಗಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಈಗ ತನ್ನ ತಾಯಿ ಇಲ್ಲ ಅಂತಷ್ಟೇ ಗೊತ್ತಿರುತ್ತದೆ ಹೊರತೂ ಯಾಕಿಲ್ಲ ಅಂತಲೂ ಅರ್ಥವಾಗದ ವಯಸ್ಸು ಅವಳದ್ದು. ಆಗವಳ ತಂದೆ ಮತ್ತೊಮ್ಮೆ ಮದುವೆ ಆಗ್ತಾರೆ. ಅವರಿಗೆ ಮದುವೆ ಆಗಬೇಡಿ ಅಂತ ಹೇಳಲು ನಾವ್ಯಾರು? ಹೆಂಡತಿಯಿಲ್ಲದ ರಾಯರು ಮನೆಕೆಲಸದ ಜೊತೆ ಮಗಳ ಪಾಲನೆಯಲ್ಲಿ ಸೋತು ಬಿಟ್ಟಿರುತ್ತಾರೆ. ಹೆಣ್ಣಿಲ್ಲದ ಮನೆಯೂ ಒಂದು ಮನೆಯೇ? ಅದಕ್ಕಾಗಿ ಅವರು ಮತ್ತೊಂದು ಹೆಣ್ಣನ್ನು ಮದುವೆ ಆಗುತ್ತಾರೆ. ಈ ವಿಷಯದಲ್ಲಿ ಅವರನ್ನು ಕ್ಷಮಿಸೋಣ... ಆದರೆ ಬಲತಾಯಿಯಾಗಿ ಬಂದ ಪದ್ಮ ಪಾಪದ ಮಗುವಾದ ಕುಸು...

ಅವಳ ಮನೆ by ತ್ರಿವೇಣಿ

Image
  ಹೆಣ್ಣುಮಕ್ಕಳಿಗೆ ಇದೊಂದು ಪ್ರಶ್ನೆ ಸದಾ ಕಾಡುತ್ತದೆ. "ನನ್ನ ಮನೆ ಯಾವುದು?" ಎನ್ನುವುದು. ಏಕೆಂದರೆ ಹುಟ್ಟಿದಾಗಿನಿಂದಲೇ ಆಕೆಯ ತಲೆಗೆ 'ಅವಳು ಬೇರೆ ಮನೆಗೆ ಸೇರುವವಳು' ಅಂತಲೇ ತಲೆಗೆ ತುಂಬಿ ಬೆಳೆಸಲಾಗುತ್ತಿರುತ್ತದೆ. ಹಾಗಾಗಿ ಪ್ರತೀ ಹೆಣ್ಣಿಗೆ ಎರಡು ಮನೆಗಳಿರುತ್ತವೆ; ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎಂದುಕೊಳ್ಳಬಹುದು. ಆದರೆ ಕಥಾನಾಯಕಿ ಸರೋಜಿಗೆ ಬಂಪರ್ ಎಂಬಂತೆ ಮತ್ತೊಂದು ಮನೆ ಸಿಗುತ್ತದೆ. ಆದರೆ ಈ ಮನೆಗಳು ಅವಳ ಮನಸ್ಸು ತುಂಬುವುದಿಲ್ಲ. ಹುಟ್ಟಿದ ಮನೆಯಲ್ಲಿ ಬಡತನದ ಕಾರಣದಿಂದ ಅವಳನ್ನು ಒಂದು ಶ್ರೀಮಂತ ಕುಟುಂಬಕ್ಕೆ ಸಾಕಲು ಕೊಡಲಾಗುತ್ತದೆ. ಆ ವೇಳೆಗಾಗಲೇ ಏಳೆಂಟು ವರ್ಷ ವಯಸ್ಸಾಗಿದ್ದ ಆಕೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವಷ್ಟು ಮನಸ್ಥಿತಿ ಹೊಂದಿರುತ್ತಾಳೆ. ಇದುವರೆಗೂ ತಾನು ಬೆಳೆದು ಬಂದ ವಾತಾವರಣಕ್ಕೂ, ಈಗ ದಿಢೀರನೇ ಎದುರಾಗಿರುವ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದರೂ ಪ್ರಬುದ್ಧೆಯಾದ ಆಕೆ ಬಹುಬೇಗ ಎಲ್ಲವನ್ನೂ ಕಲಿಯುತ್ತಾಳೆ. ಆದರೆ ತಾನು ಆ ಶ್ರೀಮಂತರ ಮನೆಗೆ ಸೇರಿದವಳಲ್ಲ ಎಂಬ ಅರಿವು ಅವಳಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಹಳೆಯದನ್ನು ನೆನೆಸಿಕೊಳ್ಳುತ್ತಾ ಹೊಸ ಕುಟುಂಬದಲ್ಲಿಯೂ ಹೊಂದಿಕೊಳ್ಳದೇ, ಅಪರೂಪಕ್ಕೆ ತವರಿಗೆ ಬಂದಾಗ ಇಲ್ಲಿಗೂ ಹೊಂದಿಕೊಳ್ಳಲಾಗದೇ ಪರದಾಡುತ್ತಾಳೆ. ಶ್ರೀಮಂತರ ಕುಟುಂಬಕ್ಕೆ ಬಂದಾಗ ಅಪ್ಪ-ಅಮ್ಮ-ಜೊತೆಯಲ್ಲಿ ಹುಟ್ಟಿದವರನ್ನು ನೆನೆದು ದುಃಖಿಸಿದರೆ, ತವರಿಗೆ ಹೋದಾಗ ತನ...