Posts

Showing posts with the label mruthyunjaya

ಮೃತ್ಯುಂಜಯ by ನಿರಂಜನ

Image
   ಲೇಖಕರು : "ನಿರಂಜನ"    ಸಾಹಿತ್ಯ ಪ್ರಕಾರ: ಕಾದಂಬರಿ (IBH  ಪ್ರಕಾಶನ) ನಮ್ಮ ದಿನನಿತ್ಯದ ಜೀವನದಲ್ಲಿ ಒಬ್ಬರಿಗೆ ಅನ್ಯಾಯವಾದಾಗ ಯಾರೂ ಪ್ರತಿಭಟಿಸುವುದೂ ಇಲ್ಲ ,  ಆ ಅನ್ಯಾಯವನ್ನು ಪ್ರಶ್ನಿಸುವುದೂ ಇಲ್ಲ. ಏಕೆಂದರೆ   ' ದೊಡ್ಡವರನ್ನು ಪ್ರಶ್ನಿಸಬಾರದು '  ಎಂಬ ಮನೋಭಾವವನ್ನು ಚಿಕ್ಕಂದಿನಿಂದಲೇ ನಮ್ಮಲ್ಲಿ ತುಂಬಲಾಗಿರುತ್ತದೆ. ಹಾಗಾಗಿ ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರ ಮಾತು ಪಾಲಿಸುತ್ತೇವೆ ,  ದೊಡ್ಡವರಾದಾಗ ದೇಶದ ದೊರೆಗಳ ಮಾತನ್ನು ಪಾಲಿಸುತ್ತೇವೆ.   ನಾಲ್ಕು ಜನರ ಕೈಲಿ   ' ದೊಡ್ಡವರು '  ಎನಿಸಿಕೊಳ್ಳಲು ಅರ್ಹತೆ ಬೇಕು. ಆದರೆ ಈ ಸಮಾಜದಲ್ಲಿ ದುಡ್ಡಿದ್ದವನೇ ದೊಡ್ಡಪ್ಪನಾಗಿದ್ದಾನೆ. ಹಣ ಮತ್ತು ಅಧಿಕಾರ ಇರುವವನ ಮಾತನ್ನು ಎಲ್ಲರೂ ಕೇಳುತ್ತಾರೆ. ಅವನ ಜೊತೆ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದೇ ಹಣವಿಲ್ಲದವನ ಬಳಿ ಕರುಣೆಯಿಲ್ಲದೇ ವರ್ತಿಸುತ್ತಾರೆ.   ಇಂತಹಾ ಹಣದ ಮದದಿಂದ ಮೆರೆದ ಅಧಿಕಾರಶಾಹಿಗಳ ಕಥೆ ಇದು. ಅವರಿಗೆ ಹಣವೂ ಬೇಕು ,  ಅಧಿಕಾರವೂ ಬೇಕು ,  ಜೊತೆಗೆ ಪ್ರಜೆಗಳು ತಮ್ಮಾಜ್ಞೆಯಂತೆ ನಡೆಯಲೂ ಬೇಕು. ಅದಕ್ಕಾಗಿ ಅವರು ಭಕ್ತಿಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಜನರಲ್ಲಿ ಧಾರ್ಮಿಕ ಭಯ ತುಂಬಿ ಅವರನ್ನು ಅಂಧಕಾರದಲ್ಲಿಟ್ಟು ತಾವು ಮಜಾ ಮಾಡುತ್ತಿರುತ್ತಾರೆ‌. ಇಂತಹಾ ದಮನಿತರ ನಡುವಿನಿಂದ ಒಬ್ಬ ನಾಯಕ ಉದಿಸಿ ಬರುತ್ತಾನೆ. ಆ...