Posts

Showing posts with the label ನನ್ನಿ

"ನನ್ನಿ" By ಕರಣಂ ಪವನ್ ಪ್ರಸಾದ್

Image
  ಲೇಖಕರು: ಕರಣಂ ಪವನ ಪ್ರಸಾದ್   'ನನ್ನಿ' ಎಂದರೆ ಸತ್ಯ. ಮುಖಪುಟದಲ್ಲಿ ನನ್ ಒಬ್ಬಳ ಫೋಟೋ ಇರುವುದರಿಂದ ಇದು ನನ್ ಒಬ್ಬಳ ಕಥೆ, ಅದಕ್ಕಾಗಿ ನನ್ನಿ ಎಂದಿಟ್ಟಿದ್ದಾರೆ ಎಂದುಕೊಂಡಿದ್ದೆ. ಆದರೆ ನನ್ನಿ ಎಂಬುದು ಕನ್ನಡ ಪದ ಅಂತ ಕನ್ನಡಿಗಳಾಗಿರುವ ನನಗೆ ಕಾದಂಬರಿ ಮುಗಿಸಿದ ಮೇಲೆ ಕಡೆಯ ಪುಟದ ಲೇಖಕರ ಹಿನ್ನುಡಿ ನೋಡಿ ಅರ್ಥವಾಯ್ತು. ನಮಗೆ ಪರಿಚಿತತೆಗಿಂತಲೂ ಅಪರಿಚಿತತೆ ಕಡೆಯೇ ಒಲವು ಜಾಸ್ತಿ. ಏಕೆಂದರೆ ಅವರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲವಲ್ಲ. ಇಲ್ಲಿಯೂ ಬಾಲಕಿಯಾದ ದುರ್ಗಾ ತನಗೆ ಎದುರಾಗುವ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು‌ ಬೇರೆ ದಾರಿಯಿಲ್ಲದೇ 'ನನ್' (ಸಿಸ್ಟರ್ ರೋಣ) ಆಗುತ್ತಾಳೆ. ಅದಾದ ನಂತರವೇ ಅವಳಿಗೆ ಅಲ್ಲಿನ ಕರಾಳ ಮುಖ ತೆರೆದುಕೊಳ್ಳುತ್ತಾ ಹೋಗುತ್ತದೆ. ಕರಾಳವೆಂದರೆ..... ಇವಳ ಜೊತೆ ಯಾರೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ ಅಥವಾ ಇವಳ ಮೇಲೆ ದೈಹಿಕವಾಗಿ ಆಗಲೀ ಮಾನಸಿಕವಾಗಿಯಾಗಲೀ ದೌರ್ಜನ್ಯ ನಡೆಸುವುದಿಲ್ಲ. ಆದರೆ ಸೇವೆಯ ನೆಪದಲ್ಲಿ ಬಡಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಆಕೆ ಕೊರಗುತ್ತಾಳೆ. ಏಕೆಂದರೆ ಅವರ ಸಿ.ಎಂ.ಸಿ (Charity Mission for culcutta) ಸಂಸ್ಥೆಯಲ್ಲಿರುವ ಅನಾಥರು, ವಯೋವೃದ್ಧರು ಖಾಯಿಲೆಯಿಂದಲೋ ಹಸಿವೆಯಿಂದಲೋ ನೋವು ಅನುಭವಿಸುತ್ತಿರುವುದನ್ನು ಕಂಡು 'ಅವರು ಪಾಪ ಅನುಭವಿಸುತ್ತಿದ್ದಾರೆ' ಎಂದು ಅವರಿಗೆ ಚಿಕಿತ್ಸೆ ಕೊಡದೇ ಸಾಯಲು ಬಿಡುವುದು, ಊಟ ಹಾಕುತ್ತೇವೆ ...