Posts

Showing posts with the label ಕರ್ಮ

"ಕರ್ಮ" By ಕರಣಂ ಪವನ್ ಪ್ರಸಾದ್

Image
ಲೇಖಕರು: ಕರಣಂ ಪವನ ಪ್ರಸಾದ್ ಯಾವ ಕರ್ಮ? ಅದು ಅಪರ ಕರ್ಮ. ಆಡುಭಾಷೆಯಲ್ಲಿ ತಿಥಿ ಎನ್ನಲಾಗುತ್ತದೆ. ಆದರೆ ವೈದಿಕರು ಆ ಪದವನ್ನು ಬಳಸದೇ ಕರ್ಮ ಅಥವಾ ಕಾರ್ಯ ಎಂದೇ ಹೇಳುತ್ತಾರೆ. ಹಾಗಾಗಿ "ಕರ್ಮ" ಎಂದರೆ ಕ್ರಿಯೆಯಲ್ಲ... ಆ ಕ್ರಿಯೆಯ ಕಾರ್ಯ.  ಕಾಲ ಬದಲಾಗುತ್ತಿದ್ದಂತೆ ಮನುಷ್ಯ ತಾನೂ ಸಹ ಕಾಲದೊಂದಿಗೆ ಬದಲಾಗುತ್ತಾ ಬರುತ್ತಾನೆ. ಅವನ ಸೌಕರ್ಯ ಹೆಚ್ಚಿದಂತೆಲ್ಲಾ ಆತ ಸೋಮಾರಿಯಾಗುತ್ತಾನೆ. ಅತೀ ಅವಶ್ಯಕತೆ ಇರದ ಹೊರತೂ ಕಷ್ಟದ ಕಾರ್ಯಗಳಲ್ಲಿ ಆತ ತೊಡಗಲಾರ. ಇದೂ ಹಾಗೆಯೇ.... ಬೆಂಗಳೂರಿನ ಐಟಿ-ಬಿಟಿ ಸಂಸ್ಕೃತಿಗೆ ಒಗ್ಗಿ ಹೋಗಿರುವ ಕಥಾನಾಯಕನಿಗೆ ಹದಿಮೂರು ದಿನಗಳ ಶ್ರಾದ್ಧ ಮಾಡು ಅಂದರೆ ಹೇಗೆ ಸಾಧ್ಯ? ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಆದರೆ ಶ್ರದ್ಧೆಯೆಲ್ಲಿದೆ? ತಾಳ್ಮೆಯಲ್ಲಿದೆ.. ತಾಳ್ಮೆ ಎಲ್ಲಿದೆ? ಅದು ಸತ್ತು ಹೋಗಿದೆ... ಟ್ರಾಫಿಕ್ಕಿನಲ್ಲಿ ನೂರಿಪ್ಪತ್ತು ಸೆಕೆಂಡಿನಷ್ಟು ಕಾಯಲಾಗದ ಆತುರಗಾರರು ನಾವು.. ಇನ್ನು ಕಂಡು ಕೇಳರಿಯದ ಭಾಷೆಯ ಮಂತ್ರೋಚ್ಛಾರಣೆಯ ಶ್ರಾದ್ಧದ ಕಾರ್ಯ ಮಾಡಲು ತಾಳ್ಮೆ ಇರುವುದೇ?  ಅದಕ್ಕಾಗಿಯೇ ಕಥಾನಾಯಕ ನಮಗಿಷ್ಟವಾಗುತ್ತಾನೆ.  ನಾವೂ ಅವನಂತೆ ಯೋಚಿಸುತ್ತೇವಲ್ಲ... ಹಾಗಾಗಿ ಕಥೆ ಓದುವಾಗ ಅವನ ದೃಷ್ಟಿಕೋನ ಸರಿ ಅಂತಲೇ ಅನ್ನಿಸುತ್ತದೆ. ಅಲ್ಲದೇ ಆತನ ಹೆಂಡತಿ... ಅವಳು ಸಹ ಮಾಡರ್ನ್ ಗರ್ಲ್.. ಬೆಂಗಳೂರಿನ ಬಹುತೇಕರು ಜಾತಿ-ಸಂಪ್ರದಾಯವಿಲ್ಲದೇ ಒಂದು ಮೆಟ್ರೋಪಾಲಿಟನ್ ಸಂಸ್ಕೃತಿ ಬಾಳುತ್ತಿದ್ದಾರೆ. ಹಾಗ...