Posts

Showing posts with the label ಹುಣ್ಸ್ ಮಕ್ಕಿ ಹುಳ

ಹುಣ್ಸ್ ಮಕ್ಕಿ ಹುಳ

Image
  ಈ ಪುಸ್ತಕದ ಬಗ್ಗೆ ಮೊದಲ ಬಾರಿ ತಿಳಿದಾಗ ನನ್ನನ್ನು ಕಾಡಿದ ಸಂಗತಿ ಎಂದರೆ 'ಈ ಪುಸ್ತಕ ಯಾವ ಪ್ರಕಾರಕ್ಕೆ ಸೇರುತ್ತದೆ?' ಎನ್ನುವುದು. ಕಥೆಯಾ(ಗಳಾ), ಕಾದಂಬರಿಯಾ, ಲೇಖನಗಳ ಸಂಗ್ರಹವಾ ಅಥವಾ ಆತ್ಮಕಥೆಯಾ ಅಂತ ಅರ್ಥವಾಗದೇ ಪುಸ್ತಕ ಬಿಡುಗಡೆಗಾಗಿ ಕಾದಿದ್ದೆ. ಇದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದರೂ ಈ ಪುಸ್ತಕ ಯಾವ ಪ್ರಕಾರಕ್ಕೆ ಸೇರುತ್ತದೆ ಅಂತ ಅವರೂ ಹೇಳಲಿಲ್ಲ. ಅಂತೂ ಇಂತೂ ಪುಸ್ತಕ ಕೈ ಸೇರಿದಾಗ ಓದುವ ಮುನ್ನ ಅಷ್ಟೂ ಪುಟಗಳನ್ನು ತಿರುಗಿಸಿ ನೋಡಿದೆ. ಆಗ ಇದು ಯಾವ ಪ್ರಕಾರದ ಪುಸ್ತಕ ಅಂತ ಗೊತ್ತಾಯ್ತು. ಹಾಗಾದರೆ "ಏನಿ್ದೆ ಇದರಲ್ಲಿ?" ಎನ್ನಬೇಡಿ. "ಏನಿಲ್ಲ?" ಅಂತ ಕೇಳಿ. ಎಲ್ಲವೂ ಇದೆ... ಎಲ್ಲವೂ! ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದ ಹೆಣ್ಮಗಳು ಬೆಂಗಳೂರಿನಂತಹಾ ಮಹಾನಗರಿಯಲ್ಲಿ ಕೆಲಸ ಹುಡುಕುವ ಕಷ್ಟದ ಬಗ್ಗೆ ಇದರಲ್ಲಿ ಬರೆಯಲಾಗಿದೆ. ಅದರಲ್ಲೇನು ಮಹಾ ಅಂತೀರಾ? ಹೌದು. ನಮಗೆಲ್ಲರಿಗೂ ಸಹ ಕೆಲಸ ಹುಡುಕುವ ಕಷ್ಟ ಎದುರಾಗಿದೆ, ನಾವೂ ಸಹ ಇಂಗ್ಲೀಷ್ ಬರದೇ ಪರದಾಡಿದ್ದೀವಿ. ಹೆಚ್ಚುಗಾರಿಕೆ ಏನೂ ಇಲ್ಲ. ಆದರೆ ಲೇಖಕಿಯ ಸಂಕಷ್ಟ ಬೇರೆ ಬಗೆಯದು. ಚಿಕ್ಕ ವಯಸ್ಸಿನಿಂದಾದ ಅಗ್ನಿಯ ಅವಘಡದಿಂದ ಮುಖ ಸುಟ್ಟು ಹೋಗಿರುವುದರಿಂದ ಕೆಲಸ ಕೇಳಲು ಹೋಗುವುದು ಎಂತಹಾ ಹಿಂಸೆ ಎಂಬ ಬಗ್ಗೆ ಯಾರಿಗಾದರೂ ಊಹೆ ಇದೆಯೇ...?? ಮುಖ ನೋಡಿ ಮಣೆ ಹಾಕುವ ಜನರೇ ತುಂಬಿರುವಾಗ ಪ್ರೀತಿ ತುಂಬಿದ ಹೃದಯ ಗಮನಿಸುವಷ್ಟು ತಾಳ್ಮೆ ಯಾರಿಗಾದರೂ ...