Posts

Showing posts with the label ರವಿ ಬೆಳಗೆರೆ

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

Image
  ಪುಸ್ತಕ ವಿಮರ್ಶೆ ಹೀಗೆಯೇ ಇರಬೇಕು‌ ಎಂಬ ನಿಯಮವಿದೆಯೇ? ಗೊತ್ತಿಲ್ಲ. ಆದರೆ ಒಂದು 'ಪುಸ್ತಕ' ಹೀಗೆಯೇ ಇರಬೇಕು ಎಂಬ ನಿಯಮ ಇರಲಿಕ್ಕಿಲ್ಲ. ಇಲ್ಲದಿದ್ದರೆ ಹಿಂದೆಂದೂ ಓದಿರದ 'ಹೊಸ ರೀತಿಯ' ಈ ಪುಸ್ತಕ ಇರುತ್ತಲೇ ಇರಲಿಲ್ಲ. ಬೆನ್ನುಡಿ ಓದಿದರೆ ಇದು ಪ್ರೀತಿಸಿ ಮೋಸ ಮಾಡುವ (?) ಹುಡುಗಿಯ ಕಥೆ ಇರಬಹುದು ಎಂದೆನಿಸುತ್ತದೆ. ಮದುವೆಯಾಗಿ ಮಕ್ಕಳಿರುವ ನಾನು ಸಹ 'ಇದನ್ನು ಓದಿ ನಾನು ಮಾಡುವಂಥದ್ದೇನಿಲ್ಲ' ಅಂತಲೇ ಕಾಲ ಕಳೆಯುತ್ತಿದ್ದೆ. ಆದರೆ ಒಮ್ಮೆ ಅಕಸ್ಮಾತ್ತಾಗಿ ಈ ಪುಸ್ತಕ ಹಿಡಿದೆ. ಕಂಡಿದ್ದು ಬೇರೆಯದೇ ಪ್ರಪಂಚ!!! ಪುಸ್ತಕದಲ್ಲಿನ ಪ್ರತೀ ಬರಹದಲ್ಲಿಯೂ, ಪ್ರತೀ ಸಾಲಿನಲ್ಲಿಯೂ ಯಾವುದೋ ಒಂದು ಜೀವನಾನುಭವವಿದೆ. ಆ ಘಟನೆಗಳು ನಮಗೆ ಏನೋ ಸೂಚ್ಯವಾಗಿ ಹೇಳುತ್ತವೆ... ಒಬ್ಬನೇ ಮನುಷ್ಯನಿಗೆ ಇಷ್ಟೊಂದು ಪ್ರಪಂಚ ಜ್ಞಾನ ಇರಲು ಸಾಧ್ಯವಾ ಅಂತ ಗಾಬರಿಯಾಗುವಷ್ಟು ಪಾತ್ರ ಪ್ರಪಂಚ ದೊಡ್ಡದಿದೆ. ತನಗೆ ಗೊತ್ತಿರುವುದನ್ನು, ಹೇಳಿದ್ದನ್ನು, ಕೇಳಿದ್ದನ್ನು ಸಂದರ್ಭಕ್ಕೆ ತಕ್ಕಂತೆ ತನ್ನ ಬರಹದೊಳಗೆ ಇಳಿಸುವ ಚಾಕಚಕ್ಯತೆ ಲೇಖಕನಿಗೆ ಬೇಕಿರುತ್ತದೆ. ಅದು ಇವರಿಗೆ ಸಹಜವಾಗಿಯೇ ಸಿದ್ಧಿಸಿದೆ. ಬರಹದ ಶೈಲಿ ಅಂತೂ... ಓದಿಯೇ ಸವಿಯಬೇಕು. ಮೊದಲ ಬಾರಿ ಇದನ್ನು ಓದುತ್ತಿದ್ದಾಗ, ಬಹುಶಃ ಲೇಖಕರು ತಮಗೆ ಕಂಡ ಪ್ರತಿಯೊಂದನ್ನೂ ಈ ಕಥೆಯೊಳಗೆ ತಂದಿದ್ದಾರೆ ಅಂತಲೇ ಅಂದುಕೊಂಡಿದ್ದೆ. ಆದರೆ ಪುಸ್ತಕ ಮುಗಿದಾಗ ಗೊತ್ತಾಯ್ತು.... ಇಲ್ಲಿನ‌ ಪ್ರ...