Posts

Showing posts with the label ವಿವೇಕ್ ಶ್ಯಾನುಭಾಗ್

ಘಾಚರ್ ಘೋಚರ್ by ವಿವೇಕ್ ಶಾನಭಾಗ್

Image
ಲೇಖಕರು: ವಿವೇಕ್ ಶಾನಭಾಗ ಹಾಗೆಂದರೇನು? ಘಾಚರ್ ಘೋಚರ್ ಎಂದರೆ? ಉಹುಂ... ಅದನ್ನು ತಿಳಿಯಬೇಕೆಂದರೆ ಪೂರ್ತಿ ಕಥೆ ಓದಬೇಕು. ಓದಿದ ನಂತರ ನಾವೂ ಸಹ ಕೆಲವು ಸಂದರ್ಭಗಳಲ್ಲಿ 'ಘಾಚರ್-ಘೋಚರ್' ಅಂತ ಬಳಸಲು ಶುರುಮಾಡಿಬಿಡುವ ಚಾನ್ಸಿದೆ. ಆದರೆ ನಾನು ಇದುವರೆಗೂ ಈ ಪುಸ್ತಕ ಓದಿಲ್ಲದೇ ಇದ್ದುದಕ್ಕೆ ಕಾರಣವೇ ಇದರ 'ಶೀರ್ಷಿಕೆ'. ಆದರೆ ಓದಿದ ನಂತರ, ಈಗ ವಿವೇಕ ಶಾನುಭಾಗ ಅವರ ಬರಹಕ್ಕೆ ಸಂಪೂರ್ಣ ಮನಸೋತಿದ್ದೇನೆ. ಆ ರೀತಿ ಬರಹಕ್ಕೆ ಮನಸೋಲುವಂತೆ ಮಾಡುವ ಅಂಶಗಳಿವೆ ಇದರಲ್ಲಿ. ಭೂಮಿಯ ಮೇಲೆ ಆರುನೂರಾ ಮೂವತ್ತು ಕೋಟಿ ಜನರಿದ್ದೇವೆ. ಒಬ್ಬೊಬ್ಬರದು ಒಂದೊಂದು ಮನಸ್ಥಿತಿ. ನಮಗೆ ಎಲ್ಲರ ಮನಸ್ಸಿನೊಳಗೆ ಹೊಕ್ಕು ಅವರ ಮನಸ್ಸುಗಳನ್ನು ತಿಳಿಯಲು ಬರುವುದಿಲ್ಲ ಅಲ್ವೇ? ಅದಕ್ಕೆ ಹಿರಿಯರು "ದೇಶ ಸುತ್ತಿ ನೋಡು: ಕೋಶ ಓದಿ ನೋಡು" ಅಂತ ಗಾದೆ ಮಾಡಿರುವುದು. ಈ ಪುಸ್ತಕ ಓದಿದರೆ 'ಕೋಶ' ಓದಿದಂತೆಯೇ, ನಮಗೆ ಒಮ್ಮೆಲೇ ಹಲವು ವ್ಯಕ್ತಿತ್ವಗಳ ಪರಿಚಯವಾಗುತ್ತದೆ. ಅಷ್ಟಾಗಿ ಜನರನ್ನು ಸೇರದ ನನ್ನಂಥವಳಿಗೂ ಸಹ, ನಮ್ಮೆದುರಿನ ಜನರ ಮನಸ್ಸಿನೊಳಗೆ ಏನು ನಡೆಯುತ್ತಿರಬಹುದು ಎಂಬ ಊಹೆ ಮಾಡುವ ಶಕ್ತಿ ನೀಡುತ್ತದೆ ಈ ಪುಸ್ತಕ. ನಮ್ಮ ಜೀವನದಲ್ಲಿ ನಮಗೆ ಎಲ್ಲಾ ಅನುಭವಗಳೂ ಆಗಲೇಬೇಕು ಅಂತಿಲ್ಲ. ಯಾರೋ ಅಪರಿಚಿತ ಹೆಂಗಸು ದಿಢೀರನೆ ಮನೆಯೊಳಗೆ ನುಗ್ಗಿ ಮನೆ ಯಜಮಾನನೊಡನೆ ತನಗೆ ಆಪ್ತತೆಯಿದೆ ಅಂತ ಪ್ರಕಟಿಸಿದರೆ ಆ ಮನೆಯವರು ಹೇಗೆ ಪ್ರತಿಕ್ರಿಯಿಸಬಹ...