Posts

Showing posts with the label ಕನ್ನಡ ಪುಸ್ತಕ

Parda & Polygami (Kannada)

Image
  ಪುಸ್ತಕ ವಿಮರ್ಶೆ: "ಪರ್ದಾ ಮತ್ತು ಪಾಲಿಗಮಿ" ಮೂಲ‌ ಲೇಖಕರು: ಇಕ್ಬಾಲುನ್ನೀಸಾ ಹುಸೇನ್ ಅನುವಾದಕರು: ದಾದಾಪೀರ್ ಜೈಮನ್ ಈ ಪುಸ್ತಕ ಓದಲು ಮುಖ್ಯವಾದ ಕಾರಣವೆಂದರೆ ಇದರ ಮುನ್ನುಡಿ ಬರೆದುಕೊಟ್ಟಿರುವ ಡಾ. ಸಿ.ಎನ್.ರಾಮಚಂದ್ರನ್ ಅವರ ಮಾತುಗಳು. ಅವರ ಮಾತುಗಳು ಈ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುತ್ತವೆ. ನಾನು ಮೂಲ ಇಂಗ್ಲೀಷ್ ಕಾದಂಬರಿ ಓದಿಲ್ಲ. ಹಾಗಾಗಿ ಅನುವಾದವೆಂದರೆ, ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದ ಕಾದಂಬರಿ ಬಹುಶಃ ಡಾಕ್ಯುಮೆಂಟರಿ ಥರ ನೀರಸವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಅನುವಾದಕರು ಎಷ್ಟು ಲವಲವಿಕೆಯಿಂದ ಅನುವಾದ ಮಾಡಿದ್ದಾರೆಂದರೆ ಓದುತ್ತಾ ಹೋದಂತೆ ನಮಗೆ ಇದು ಇಂಗ್ಲೀಷಿನ ಅನುವಾದ ಅಂತ ಮರೆತೇ ಹೋಗುತ್ತದೆ. ಅನುವಾದರು ಬಳಸುವ ಕನ್ನಡದ ಸಂಭಾಷಣೆ, ಸಂದರ್ಭಕ್ಕೆ ತಕ್ಕ ಹಾಸ್ಯ, ಆಗಾಗ ಬಳಸುವ ಉರ್ದು ಪದಗಳು ನಮಗೆ ಕಾದಂಬರಿಯನ್ನು ಮತ್ತಷ್ಟು ಆತ್ಮೀಯವಾಗಿಸುತ್ತದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯೇ ನನಗೆ ಬಹಳ ಇಷ್ಟವಾದುದು. ಅನುವಾದಕರೇ ಹೇಳುವಂತೆ "ಅನುವಾದ ಕೇವಲ ಭಾಷಾಂತರ ಕ್ರಿಯೆಯಲ್ಲ. ಅನುವಾದದಲ್ಲೂ ಮೂಲದ ಒಂದಿಷ್ಟು ಸೋರಿಹೋಗಿರುತ್ತದೆ. ಹಾಗೆಯೇ ಅದರಲ್ಲಿ ಮತ್ತೇನೋ ಹೊಸತು ದಕ್ಕಿಬಿಟ್ಟಿರುತ್ತದೆ". ಹೌದು... ಕೆಲವು ಸಂಭಾಷಣೆಗಳು ನಮ್ಮಲ್ಲಿ ಮಾತ್ರ ನಡೆಯುವಂಥವು. ಅದನ್ನೆಲ್ಲಾ ಗುರುತಿಟ್ಟುಕೊಂಡು ಎಲ್ಲಿ ಸೇರಿಸಬೇಕೋ ಅಲ್ಲಿ ಸೇರಿಸಿ ಸಮಯಪ್ರಜ್ಞೆ ತೋರಿ...

ಮಳೆಯಲ್ಲಿ ನೆನೆದ ಕಥೆಗಳು

Image
  (ವಿವಿಧ ಲೇಖಕರ ಕತೆಗಳ ಗುಚ್ಚ) ಕಥಾಗುಚ್ಛದ ಹೆಸರು 'ಮಳೆಯಲ್ಲಿ ನೆನೆದ ಕಥೆಗಳು'. ಅಂದರೆ ಮಳೆಯಲ್ಲಿ ನೆಂದಾಗ ನಮಗೆ ಆಹ್ಲಾದವಾಗುವುದಿಲ್ಲವೇ... ಈ ಕಥೆಗಳನ್ನು ಓದಿದಾಗ ನಮಗೆ ಅದೇ ರೀತಿ ಖುಷಿಯಾಗುತ್ತದೆ. ಏಕೆಂದರೆ ಇಲ್ಲಿನ ಕಥೆಗಳಲ್ಲಿ ಹೊಸತನವಿದೆ, ಲವಲವಿಕೆ ಇದೆ. ಕತೆಗಾರರು ಯಾವ ಮುಲಾಜಿಗೂ ಕಟ್ಟುಬೀಳದೇ ತಮಗನ್ನಿದಂತೆ ಸ್ವತಂತ್ರವಾಗಿ ಬರೆದಿದ್ದಾರೆ. ಈ ಹೊಸತನವೇ ನನಗೆ ಮಳೆಯಲ್ಲಿ ನೆಂದಷ್ಟು ಖುಷಿ ಕೊಟ್ಟಿದ್ದು.  ಅದಕ್ಕಿಂತಲೂ ಖುಷಿ ತಂದವರು ಈ ಕಥೆಗಳನ್ನು ಆಯ್ಕೆ ಮಾಡಿರುವ ಸಂಪಾದಕರು. ಇಂತಹಾ ನವ್ಯ ರೀತಿಯ ಕಥೆಗಳನ್ನು ಗುರುತಿಸಿ, ಆಯ್ಕೆ ಮಾಡಿ, ನಮ್ಮವರೆಗೂ ತಲುಪಿಸಿದ ಅವರಿಗೆ ನಿಜಕ್ಕೂ ನಾನು ಕೃತಜ್ಞೆ. ಬಹಳ ಹೊಸತನದಿಂದ ಕೂಡಿರುವ ಈ ಕತೆಗಳಿಗೆ ಅವರು ಮನ್ನಣೆ ಕೊಟ್ಟಿರುವುದೇ ಖುಷಿ ತರುತ್ತದೆ.  ಕಥಾಗುಚ್ಚ ತೆರೆದುಕೊಂಡ ನಂತರ ಮೊದಲು ಸಿಗುವ ಕಥೆ " ಪರಿಕಲಿತ ". ರಂಜನಿ ಕೀರ್ತಿ ಅವರ ಈ ಕತೆ ನಮ್ಮನ್ನು ಈ ಕಾಥಾಲೋಕಕ್ಕೆ ಎಳೆದುಕೊಳ್ಳಲು ಸಶಕ್ತವಾಗಿದೆ. ಮೊದಲ ಕತೆ ಹುಟ್ಟಿಸುವ ಭರವಸೆಯೇ, ಇಡೀ ಕಥೆಸಂಕಲನ ಓದಲು ಪ್ರೇರೇಪಿಸುತ್ತದೆ. ನಾವೆಲ್ಲಾ ಸಾಮಾನ್ಯದಲ್ಲಿ ಮತ್ತೊಬ್ಬರ ಜೀವನದಲ್ಲಿ ಏನು ಯೋಚಿಸುತ್ತೇವೆಯೋ, ಹಾಗೆ ನಮ್ಮ ದೃಷ್ಟಿಯಿಂದಲೇ ಕಥೆ ಮುನ್ನಡೆಸುತ್ತಾ, ಕೊನೆಗೆ ಕೊಡುವ ಷಾಕ್ ಇದೆಯಲ್ಲ..... 440 ವೋಲ್ಟಿಗಿಂತಲೂ ಹೆಚ್ಚು.  ನಂತರದ ಕಥೆ ' ಮಾಂಕಾಳಿ '. ವಾಣಿ ಸುರೇಶ್ ಅವರ ಈ ಕತೆ ತಾಯಿಯರ ಜೀವನ...